ಆಶಾ

ಹುಡುಗಿ,

ಕೇಳಲಿಲ್ಲ ನೀ ಯಾರೆಂದು,
ಹೇಳಿದರು ನಾ ಯಾರೆಂದು,
ತಿಳಿಸಲಿಲ್ಲ ನೀ ಯಾರೆಂದು,
ಹೇಳಿದರು ನಾ ನಿನಗೆಂದು,

ಕಾಣಲಿಲ್ಲ, ನಾ ನಿನ್ನ,
ನೋಡಿರುವೆ, ನೀ ನನ್ನ,
ಕಾಣದ ಈ ಪ್ರೀತಿಯನ್ನ,
ನೋಡದಿದ್ದರೂ ನಾ ನಿನ್ನ,
ಕಾಣುತಿರುವೆ, ಕನಸನ್ನ,
ನನಸಾಗಿಸು ಗೆಳತಿ,
ಅದು ನಮ್ಮಿಬ್ಬರ ಪ್ರೀತಿ,

ಇಂದಲ್ಲ, ನಾಳೆ
ನೀ ಎನ್ನ ಪ್ರೀತಿಯಲ್ಲೇ,
ಮುಳುಗಿಸಿ, ನಗಿಸುವ ಆಶೆ(ಶಾ),

ಇರುವೆಯಾ ಗೆಳತಿ,
ಜೀವನದ ಜೊತೆಯಲ್ಲಿ ಸದಾ,
ಜೀವ ಹೋಗುವವರೆಗೂ ಪ್ರೀತಿಸುವ ಈ ಅರವಿಂದ.

1 ಕಾಮೆಂಟ್‌(ಗಳು):

  Harisha - ಹರೀಶ

ಡಿಸೆಂಬರ್ 21, 2008 ರಂದು 02:34 ಅಪರಾಹ್ನ ಸಮಯಕ್ಕೆ

ಚೆನ್ನಾಗಿದೆ. ನಿಮ್ಮ ಆಸೆ (ಆಶಾ) ಕೈಗೂಡಲಿ :-)